ಅಪೊಸ್ತಲರ ಕೃತ್ಯಗ

ಅಧ್ಯಾಯ : 1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28


ಅಧ್ಯಾಯ 4

1 ಅವರು ಜನರೊಂದಿಗೆ ಮಾತನಾಡು ತ್ತಿದ್ದಾಗ ಯಾಜಕರೂ ದೇವಾಲಯದ ಅಧಿಪತಿಯೂ ಸದ್ದುಕಾಯರೂ ಅವರಿಗೆ ವಿರೋಧ ವಾಗಿ ಬಂದರು;
2 ಯಾಕಂದರೆ ಯೇಸುವಿನ ಮೂಲಕ ಸತ್ತವರಿಗೆ ಪುನರುತ್ಥಾನವಾಗುವದೆಂದು ಅಪೊಸ್ತಲರು ಜನರಿಗೆ ಬೋಧಿಸಿ ಕಲಿಸುತ್ತಿದ್ದದರಿಂದ ಅವರು ಸಂತಾಪಪಟ್ಟಿದ್ದರು.
3 ಇದಲ್ಲದೆ ಅವರನ್ನು ಹಿಡಿದು ಮರುದಿನದ ವರೆಗೆ ಕಾವಲಲ್ಲಿಟ್ಟರು; ಯಾಕಂದರೆ ಆಗ ಸಾಯಂಕಾಲವಾಗಿತ್ತು.
4 ಆದಾಗ್ಯೂ ವಾಕ್ಯವನ್ನು ಕೇಳಿದವರಲ್ಲಿ ಅನೇಕರು ನಂಬಿದರು; ಗಂಡಸರ ಸಂಖ್ಯೆ ಸುಮಾರು ಐದು ಸಾವಿರವಾಗಿತ್ತು.
5 ಮರುದಿನ ಅವರ ಅಧಿಕಾರಿಗಳೂ ಹಿರಿಯರೂ ಶಾಸ್ತ್ರಿಗಳೂ
6 ಮಹಾಯಾಜಕನಾದ ಅನ್ನನೂ ಕಾಯಫನೂ ಯೋಹಾನನೂ ಅಲೆಕ್ಸಾಂದ್ರನೂ ಮಹಾಯಾಜಕನ ಸಂಬಂಧಿಕರೆಲ್ಲರೂ ಯೆರೂಸ ಲೇಮಿನಲ್ಲಿ ಕೂಡಿಬಂದರು.
7 ಇವರು ಅಪೊಸ್ತಲರನ್ನು ಮಧ್ಯೆ ನಿಲ್ಲಿಸಿ--ನೀವು ಎಂಥಾ ಶಕ್ತಿಯಿಂದ ಇಲ್ಲವೆ ಯಾವ ಹೆಸರಿನಿಂದ ಇದನ್ನು ಮಾಡಿದಿರಿ ಎಂದು ಕೇಳಿದರು.
8 ಆಗ ಪೇತ್ರನು ಪವಿತ್ರಾತ್ಮಭರಿತನಾಗಿ ಅವರಿಗೆ--ಜನರ ಅಧಿಕಾರಿಗಳೇ, ಇಸ್ರಾಯೇಲಿನ ಹಿರಿಯರೇ,
9 ಈ ದುರ್ಬಲನಿಗೆ ಸ್ವಸ್ಥವಾದ ಒಳ್ಳೇ ಕಾರ್ಯವು ಹೇಗಾಯಿತೆಂಬ ವಿಷಯವಾಗಿ ಈ ದಿವಸ ನಾವು ವಿಚಾರಿಸಲ್ಪಡುವದಾದರೆ
10 ನಿಮ್ಮೆಲ್ಲರಿಗೂ ಎಲ್ಲಾ ಇಸ್ರಾಯೇಲ್ಯರಿಗೂ ತಿಳಿಯಬೇಕಾದದ್ದೇ ನಂದರೆ, ಆತನಿಂದಲೇ ಅಂದರೆ ನೀವು ಶಿಲುಬೆಗೆ ಹಾಕಿಸಿದಂಥ ಮತ್ತು ದೇವರು ಸತ್ತವರೊಳಗಿಂದ ಎಬ್ಬಿಸಿದಂಥ ನಜರೇತಿನ ಯೇಸು ಕ್ರಿಸ್ತನ ಹೆಸರಿ ನಿಂದಲೇ ಈ ಮನುಷ್ಯನು ಸ್ವಸ್ಥನಾಗಿ ನಿಮ್ಮೆದುರಿನಲ್ಲಿ ನಿಂತಿರುತ್ತಾನೆ.
11 ಮನೆ ಕಟ್ಟುವವರಾದ ನಿಮ್ಮಿಂದ ಹೀನೈಸಲ್ಪಟ್ಟ ಈ ಕಲ್ಲೇ ಮುಖ್ಯವಾದ ಮೂಲೆಗಲ್ಲಾ ಯಿತು.
12 ರಕ್ಷಣೆಯು ಇನ್ನಾರಲ್ಲಿಯೂ ಇಲ್ಲ; ಯಾಕಂದರೆ ಆಕಾಶದ ಕೆಳಗೆ ಮನುಷ್ಯರಲ್ಲಿ ಕೊಡ ಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ ಎಂದು ಹೇಳಿದನು.
13 ಅವರು ಪೇತ್ರ ಯೋಹಾನರ ಧೈರ್ಯವನ್ನು ನೋಡಿ ಇವರು ವಿದ್ಯೆಯಿಲ್ಲದವರೂ ತಿಳುವಳಿಕೆ ಯಿಲ್ಲದವರೂ ಎಂದು ಗ್ರಹಿಸಿ ಆಶ್ಚರ್ಯಪಟ್ಟು ಅವರು ಯೇಸುವಿನೊಂದಿಗೆ ಇದ್ದವರೆಂದು ತಿಳಿದುಕೊಂಡರು.
14 ಸ್ವಸ್ಥನಾದವನು ಅವರೊಂದಿಗೆ ನಿಂತಿರುವದನ್ನು ನೋಡಿ ಅದಕ್ಕೆ ವಿರೋಧವಾಗಿ ಏನೂ ಮಾತನಾಡ ಲಾರದೆ ಇದ್ದರು.
15 ಆದರೆ ಆಲೋಚನಾ ಸಭೆಯಿಂದ ಅಪೊಸ್ತಲರು ಹೊರಗೆ ಹೋಗಬೇಕೆಂದು ಅವರು ಅಪ್ಪಣೆಕೊಟ್ಟು ತಮ್ಮಲ್ಲಿ ಮಾತನಾಡಿಕೊಳ್ಳುತ್ತಾ--
16 ಈ ಮನುಷ್ಯರಿಗೆ ನಾವೇನು ಮಾಡೋಣ? ನಿಜ ವಾಗಿಯೂ ಅವರ ಮೂಲಕ ನಡೆದ ಪ್ರಸಿದ್ಧವಾದ ಒಂದು ಅದ್ಭುತಕಾರ್ಯವು ಯೆರೂಸಲೇಮಿನಲ್ಲಿ ವಾಸಮಾಡುವವರಿಗೆಲ್ಲಾ ಗೊತ್ತಾಗಿರುವದರಿಂದ ನಾವು ಅದನ್ನು ಅಲ್ಲಗಳೆಯಲಾರೆವು.
17 ಆದರೆ ಇದು ಜನ ರಲ್ಲಿ ಇನ್ನೂ ಹಬ್ಬದಂತೆ ಇಂದಿನಿಂದ ಅವರು ಯಾವ ಮನುಷ್ಯನ ಸಂಗಡ ಈ ಹೆಸರಿನಲ್ಲಿ ಮಾತನಾಡ ಬಾರದೆಂದು ನಾವು ಖಂಡಿತವಾಗಿ ಅವರನ್ನು ಗದರಿ ಸೋಣ ಎಂದು ಅಂದುಕೊಂಡು
18 ಅವರನ್ನು ಕರೆದು ಯೇಸುವಿನ ಹೆಸರಿನಲ್ಲಿ ಮಾತನಾಡಬಾರದು, ಬೋಧಿ ಸಲೂಬಾರದು ಎಂದು ಅವರಿಗೆ ಅಪ್ಪಣೆಕೊಟ್ಟರು.
19 ಅದಕ್ಕೆ ಪೇತ್ರ ಯೋಹಾನರು ಪ್ರತ್ಯುತ್ತರವಾಗಿ ಅವರಿಗೆ--ದೇವರ ಮಾತಿಗಿಂತ ನಿಮ್ಮ ಮಾತನ್ನು ಕೇಳು ವದು ದೇವರ ದೃಷ್ಟಿಯಲ್ಲಿ ಸರಿಯೋ ನೀವೇ ತೀರ್ಪು ಮಾಡಿರಿ.
20 ಯಾಕಂದರೆ ನಾವು ಕಂಡು ಕೇಳಿದವು ಗಳನ್ನು ಮಾತನಾಡದೆ ಇರಲಾರೆವು ಎಂದು ಹೇಳಿದರು.
21 ಹೀಗೆ ಜನರ ದೆಸೆಯಿಂದ ಅವರನ್ನು ಶಿಕ್ಷಿಸುವದಕ್ಕೆ ಯಾವ ವಿಧಾನವನ್ನೂ ಕಾಣದೆ ಇನ್ನಷ್ಟು ಬೆದರಿಸಿ ಬಿಟ್ಟುಬಿಟ್ಟರು; ನಡೆದ ಅದ್ಭುತಕಾರ್ಯಕ್ಕಾಗಿ ಎಲ್ಲರೂ ದೇವರನ್ನು ಮಹಿಮೆಪಡಿಸಿದರು.
22 ಸ್ವಸ್ಥಪಡಿಸುವ ಈ ಅದ್ಭುತಕಾರ್ಯದಿಂದ ಗುಣಹೊಂದಿದ ಆ ಮನುಷ್ಯ ನಿಗೆ ನಾಲ್ವತ್ತು ವರುಷಕ್ಕಿಂತ ಹೆಚ್ಚು ವಯಸ್ಸಾಗಿತ್ತು.
23 ಅವರು ಬಿಡುಗಡೆ ಹೊಂದಿಕೊಂಡು ತಮ್ಮ ಸ್ವಂತ ಜನರ ಬಳಿಗೆ ಹೋಗಿ ಪ್ರಧಾನಯಾಜಕರೂ ಹಿರಿಯರೂ ತಮಗೆ ಹೇಳಿದ್ದೆಲ್ಲವನ್ನು ಅವರಿಗೆ ತಿಳಿಸಿದರು.
24 ಅದನ್ನು ಕೇಳಿದಾಗ ಅವರು ಒಮ್ಮನಸ್ಸಿನಿಂದ ದೇವರಿಗೆ--ಕರ್ತನೇ, ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಉಂಟು ಮಾಡಿದ ದೇವರು ನೀನೇ;
25 ನಿನ್ನ ಸೇವಕ ನಾದ ದಾವೀದನ ಬಾಯಿಂದ--ಅನ್ಯಜನರು ಯಾಕೆ ರೇಗಿದರು? ಮತ್ತು ಜನರು ವ್ಯರ್ಥವಾದವುಗಳನ್ನು ಯಾಕೆ ಊಹಿಸಿದರು?
26 ಕರ್ತನಿಗೂ ಆತನ ಕ್ರಿಸ್ತ ನಿಗೂ ವಿರೋಧವಾಗಿ ಭೂರಾಜರು ಎದ್ದುನಿಂತರು; ಅಧಿಪತಿಗಳು ಒಂದಾಗಿ ಕೂಡಿಕೊಂಡರು ಎಂದು ಹೇಳಿದ್ದೀ.
27 ನಿಜವಾಗಿಯೂ ನೀನು ಅಭಿಷೇಕಿಸಿದ ನಿನ್ನ ಪವಿತ್ರ ಸೇವಕನಾದ ಯೇಸುವಿಗೆ ವಿರೋಧವಾಗಿ ಹೆರೋದನೂ ಪೊಂತ್ಯ ಪಿಲಾತನೂ ಅನ್ಯಜನರ ಮತ್ತು ಇಸ್ರಾಯೇಲ್‌ ಜನರ ಸಹಿತ ಒಂದಾಗಿ ಕೂಡಿಕೊಂಡು
28 ನಿನ್ನ ಹಸ್ತವು ಮತ್ತು ನಿನ್ನ ಸಂಕಲ್ಪವು ಮೊದಲೇ ನಿಶ್ಚಯಿಸಿದ್ದನ್ನು ಮಾಡಿದರು.
29 ಈಗ ಕರ್ತನೇ, ಅವರ ಬೆದರಿಕೆಗಳನ್ನು ನೋಡು; ನಿನ್ನ ಸೇವಕರು ನಿನ್ನ ವಾಕ್ಯವನ್ನು ಪೂರ್ಣ ಧೈರ್ಯದಿಂದ ಹೇಳುವ ಹಾಗೆ
30 ನಿನ್ನ ಕೈಗಳನ್ನು ಚಾಚುವದರಿಂದ ಸ್ವಸ್ಥತೆಯನ್ನುಂಟು ಮಾಡುವಂತೆಯೂ ಸೂಚಕ ಕಾರ್ಯ ಗಳು ಅದ್ಭುತಕಾರ್ಯಗಳು ನಿನ್ನ ಪವಿತ್ರ ಸೇವಕನಾದ ಯೇಸುವಿನ ಹೆಸರಿನಲ್ಲಿ ನಡೆಯುವಂತೆಯೂ ಅನು ಗ್ರಹಿಸು ಎಂದು ಗಟ್ಟಿಯಾದ ಸ್ವರದಿಂದ ಪ್ರಾರ್ಥಿಸಿ ದರು.
31 ಹೀಗೆ ಪ್ರಾರ್ಥಿಸಿದ ಮೇಲೆ ಅವರು ಕೂಡಿದ್ದ ಸ್ಥಳವು ನಡುಗಿತು. ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಮಾತನಾಡಿದರು.
32 ನಂಬಿದ್ದ ಸಮೂಹದವರ ಹೃದಯವೂ ಪ್ರಾಣವೂ ಒಂದೇ ಆಗಿತ್ತು; ಇದಲ್ಲದೆ ಅವರಲ್ಲಿ ಯಾವನೂ ತನ್ನಗಿದ್ದ ಯಾವದೊಂದನ್ನೂ ತನ್ನ ಸ್ವಂತ ದ್ದೆಂದು ಹೇಳಲಿಲ್ಲ; ಆದರೆ ಎಲ್ಲವೂ ಅವರಿಗೆ ಹುದು ವಾಗಿತ್ತು.
33 ಇದಲ್ಲದೆ ಕರ್ತನಾದ ಯೇಸುವಿನ ಪುನ ರುತ್ಥಾನದ ವಿಷಯವಾಗಿ ಅಪೊಸ್ತಲರು ಬಹಳ ಬಲ ವಾಗಿ ಸಾಕ್ಷಿಕೊಟ್ಟರು; ದೊಡ್ಡ ಕೃಪೆಯು ಅವರೆಲ್ಲರ ಮೇಲೆ ಇತ್ತು.
34 ಹೀಗಾಗಿ ಅವರಲ್ಲಿ ಕೊರತೆ ಪಡು ವವನು ಒಬ್ಬನಾದರೂ ಇರಲಿಲ್ಲ. ಹೊಲ ಮನೆಗಳಿದ್ದವ ರೆಲ್ಲರೂ ಅವುಗಳನ್ನು ಮಾರಿ ಬಂದ ಹಣವನ್ನು ತಂದು
35 ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟರು; ಪ್ರತಿ ಯೊಬ್ಬನಿಗೆ ಅವನವನ ಅಗತ್ಯತೆಯ ಪ್ರಕಾರ ಹಂಚಿ ದರು.
36 ಅಪೊಸ್ತಲರಿಂದ ಬಾರ್ನಬನೆಂದು ಅಡ್ಡ ಹೆಸರು ಹೊಂದಿದ ಕುಪ್ರ ದೇಶದ ಲೇವಿಯನಾದ ಯೋಸೇಫನೆಂಬವನು (ಬಾರ್ನಬ ಅಂದರೆ ಆದರ ಣೆಯ ಮಗನು)
37 ತನಗಿದ್ದ ಭೂಮಿಯನ್ನು ಮಾರಿ ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು.