ಅಧ್ಯಾಯ 8
1 ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--
2 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಚೀಯೋನಿನ ವಿಷಯವಾಗಿ ಅತಿ ರೋಷಗೊಂಡಿದ್ದೆನು; ಅತಿ ಉಗ್ರದಿಂದ ಅದರ ವಿಷಯದಲ್ಲಿ ರೋಷವುಳ್ಳವನಾಗಿದ್ದೆನು.
3 ಕರ್ತನು ಹೀಗೆ ಹೇಳುತ್ತಾನೆ--ಚೀಯೋನಿಗೆ ನಾನು ತಿರಿಗಿ ಕೊಂಡಿದ್ದೇನೆ; ಯೆರೂಸಲೇಮಿನ ಮಧ್ಯದಲ್ಲಿ ವಾಸಿಸು ವೆನು; ಯೆರೂಸಲೇಮು ಸತ್ಯದ ಪಟ್ಟಣವೆಂದೂ ಸೈನ್ಯಗಳ ಕರ್ತನ ಪರ್ವತವು ಪರಿಶುದ್ಧ ಪರ್ವತ ವೆಂದೂ ಕರೆಯಲ್ಪಡುವದು.
4 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇನ್ನು ಯೆರೂಸಲೇಮಿನ ಬೀದಿಗಳಲ್ಲಿ ಮುದುಕರೂ ಮುದುಕಿಯರೂ ವಾಸವಾಗಿರುವರು; ಕೇವಲ ವೃದ್ಧಾಪ್ಯದಿಂದ ಒಬ್ಬೊಬ್ಬನ ಕೈಯಲ್ಲಿ ಅವನವನ ಕೋಲು ಇರುವದು.
5 ಪಟ್ಟಣದ ಬೀದಿಗಳು ಆಡುವ ಬಾಲಕ ಬಾಲಕಿಯರಿಂದ ತುಂಬಿರುವವು.
6 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇದು ಈ ದಿವಸಗಳಲ್ಲಿ ಉಳಿದ ಈ ಜನರ ಕಣ್ಣುಗಳಿಗೆ ಆಶ್ಚರ್ಯವಾಗಿ ತೋರಿ ದರೂ ಅದು ನನ್ನ ಕಣ್ಣುಗಳಿಗೂ ಸಹ ಆಶ್ಚರ್ಯವಾಗಿ ತೋರುವದೋ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
7 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನನ್ನ ಜನರನ್ನು ಪೂರ್ವ ದಿಕ್ಕಿನ ದೇಶದಿಂದಲೂ ಪಶ್ಚಿಮ ದಿಕ್ಕಿನ ದೇಶದಿಂದಲೂ ರಕ್ಷಿಸುವೆನು.
8 ನಾನು ಅವರನ್ನು ತರುವೆನು; ಅವರು ಯೆರೂಸಲೇಮಿನ ಮಧ್ಯದಲ್ಲಿ ವಾಸಿಸುವರು; ಅವರು ನನ್ನ ಜನರಾಗಿ ರುವರು; ನಾನು ಸತ್ಯದಲ್ಲಿಯೂ ನೀತಿಯಲ್ಲಿಯೂ ಅವರ ದೇವರಾಗಿರುವೆನು.
9 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ದೇವಾಲಯವನ್ನು ಕಟ್ಟುವ ಹಾಗೆ ಸೈನ್ಯಗಳ ಕರ್ತನ ಆಲಯದ ಅಸ್ತಿವಾರವು ಹಾಕಲ್ಪಟ್ಟ ದಿವಸದಲ್ಲಿದ್ದ ಪ್ರವಾದಿಗಳ ಬಾಯಿಂದಾದ ಈ ವಾಕ್ಯಗಳನ್ನು ಈ ದಿವಸಗಳಲ್ಲಿ ಕೇಳುವವರೇ, ನಿಮ್ಮ ಕೈಗಳು ಬಲವಾಗಿರಲಿ.
10 ಈ ದಿವಸಗಳಿಗಿಂತ ಮುಂಚೆ ಮನುಷ್ಯನಿಗೆ ಕೂಲಿ ಇರಲಿಲ್ಲ, ಪಶುಗಳಿಗೆ ಕೂಲಿ ಇರಲಿಲ್ಲ; ಇಲ್ಲವೆ ಹೋಗುವವ ನಿಗೂ ಬರುವವನಿಗೂ ಇಕ್ಕಟ್ಟಿನ ದೆಸೆಯಿಂದ ಸಮಾ ಧಾನವಿರಲಿಲ್ಲ. ನಾನು ಜನರೆಲ್ಲರಲ್ಲಿ ಪ್ರತಿಯೊಬ್ಬನನ್ನು ತನ್ನ ನೆರೆಯವನಿಗೆ ವಿರೋಧವಾಗಿ ಇಟ್ಟಿದ್ದೆನು.
11 ಆದರೆ ಈಗ ಉಳಿದ ಈ ಜನರಿಗೆ ನಾನು ಪೂರ್ವದ ದಿವಸಗಳಲ್ಲಿದ್ದ ಹಾಗೆ ಇರುವದಿಲ್ಲವೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
12 ಬೀಜವುವೃದ್ಧಿಯಾಗುವದು; ದ್ರಾಕ್ಷೇ ಬಳ್ಳಿ ತನ್ನ ಫಲವನ್ನು ಕೊಡುವದು; ಭೂಮಿಯು ತನ್ನ ಹುಟ್ಟುವಳಿಯನ್ನು ಹೆಚ್ಚಾಗಿ ಕೊಡುವದು; ಆಕಾಶ ಗಳು ತಮ್ಮ ಮಂಜನ್ನು ಕೊಡುವವು; ಈ ಜನರಲ್ಲಿ ಉಳಿದವರು ಇವುಗಳನ್ನೆಲ್ಲಾ ಸ್ವಾಧೀನ ಮಾಡಿಕೊಳ್ಳು ವಂತೆ ಮಾಡುವೆನು.
13 ಆಗುವದೇನಂದರೆ, ಓ ಯೆಹೂದದ ಮನೆತನದವರೇ, ಇಸ್ರಾಯೇಲಿನ ಮನೆತನದವರೇ, ನೀವು ಜನಾಂಗಗಳಲ್ಲಿ ಶಾಪವಾಗಿದ್ದ ಪ್ರಕಾರ ನಾನು ನಿಮ್ಮನ್ನು ರಕ್ಷಿಸುವೆನು ಮತ್ತು ನೀವು ಆಶೀರ್ವಾದವಾಗಿರುವಿರಿ; ಭಯಪಡಬೇಡಿರಿ; ನಿಮ್ಮ ಕೈಗಳು ಬಲವಾಗಿರಲಿ.
14 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮ ಪಿತೃಗಳು ನನಗೆ ಸಿಟ್ಟು ಎಬ್ಬಿಸಿದಾಗ ನಾನು ನಿಮ್ಮನ್ನು ಶಿಕ್ಷಿಸುವದಕ್ಕೆ ಯೋಚಿಸಿದೆನು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ; ನಾನು ಪಶ್ಚಾತ್ತಾಪ ಪಡಲಿಲ್ಲ.
15 ನಾನು ತಿರುಗಿ ಈ ದಿವಸಗಳಲ್ಲಿ ಯೆರೂಸಲೇಮಿಗೂ ಯೆಹೂದದ ಮನೆತನದವರಿಗೂ ಒಳ್ಳೇದನ್ನು ಮಾಡಲು ಯೋಚಿಸಿದ್ದೇನೆ; ನೀವು ಭಯ ಪಡಬೇಡಿರಿ.
16 ನೀವು ಮಾಡತಕ್ಕ ಕಾರ್ಯಗಳು ಇವೇ--ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನು ಮಾತಾಡಲಿ; ನಿಜವಾದ ಸಮಾಧಾನಕರ ವಾದ ನ್ಯಾಯತೀರ್ವಿಕೆಯನ್ನು ನಿಮ್ಮ ಬಾಗಲು ಗಳಲ್ಲಿ ತೀರಿಸಿರಿ.
17 ನಿಮ್ಮ ಹೃದಯಗಳಲ್ಲಿ ಒಬ್ಬರ ಮೇಲೊ ಬ್ಬರು ಕೇಡನ್ನು ಕಲ್ಪಿಸದಿರ್ರಿ; ಸುಳ್ಳು ಪ್ರಮಾಣವನ್ನು ಪ್ರೀತಿಮಾಡಿದಿರಿ; ಇವುಗಳೆಲ್ಲವೂ ನಾನು ಹಗೆ ಮಾಡುವಂಥವುಗಳೇ ಎಂದು ಕರ್ತನು ಹೇಳುತ್ತಾನೆ.
18 ಇದಲ್ಲದೆ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--
19 ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ನಾಲ್ಕನೇ ತಿಂಗಳಿನ ಉಪವಾಸವು, ಐದನೆ ಯದು, ಏಳನೆಯದು, ಹತ್ತನೆಯದು, ಯೆಹೂದದ ಮನೆತನದವರಿಗೆ ಸಂತೋಷವೂ ಸಂಭ್ರಮವೂ ಆನಂದವಾದ ಹಬ್ಬಗಳೂ ಆಗುವವು; ಆದರೆ ಸತ್ಯ ವನ್ನೂ ಸಮಾಧಾನವನ್ನೂ ಪ್ರೀತಿಮಾಡಿರಿ.
20 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಜನಗಳೂ ಅನೇಕ ಪಟ್ಟಣಗಳ ನಿವಾಸಿಗಳೂ ಇನ್ನು ಬರುವರು;
21 ಒಂದರ ನಿವಾಸಿಗಳು ಮತ್ತೊಂದಕ್ಕೆ ಹೋಗಿ--ನಾವು ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಸೈನ್ಯಗಳ ಕರ್ತನನ್ನು ಹುಡುಕುವದಕ್ಕೂ ಬೇಗ ಹೋಗೋಣ; ನಾನು ಕೂಡ ಹೋಗುತ್ತೇನೆ ಎಂದು ಹೇಳುವರು.
22 ಹೌದು, ಅನೇಕ ಜನಗಳೂ ಬಲವಾದ ಜನಾಂಗಗಳೂ ಸೈನ್ಯಗಳ ಕರ್ತನನ್ನು ಯೆರೂಸಲೇಮಿನಲ್ಲಿ ಹುಡುಕುವದಕ್ಕೂ ಕರ್ತನ ಮುಂದೆ ಬೇಡಿಕೊಳ್ಳುವದಕ್ಕೂ ಬರುವವು.
23 ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಆ ದಿವಸ ಗಳಲ್ಲಿ ಜನಾಂಗಗಳ ಸಮಸ್ತ ಭಾಷೆಯವರೊಳಗಿಂದ ಹತ್ತು ಮನುಷ್ಯರು ಯೆಹೂದ್ಯನಾಗಿರುವವನ ಸೆರಗನ್ನು ಹಿಡಿದು--ನಾವು ನಿಮ್ಮ ಸಂಗಡ ಹೋಗುತ್ತೇವೆ; ಯಾಕಂದರೆ ನಿಮ್ಮ ಸಂಗಡ ದೇವರು ಇದ್ದಾನೆಂದು ಕೇಳಿದ್ದೇವೆ ಎಂದು ಹೇಳುವರು.