ಅಧ್ಯಾಯ 11
1 ಮೋಸದ ತಕ್ಕಡಿ ಕರ್ತನಿಗೆ ಅಸಹ್ಯವಾಗಿದೆ; ನ್ಯಾಯದ ತೂಕ ಆತನ ಆನಂದವು.
2 ಗರ್ವ ಬಂದಾಗ ನಾಚಿಕೆಯೂ ಬರುತ್ತದೆ; ದೀನರಲ್ಲಿ ಜ್ಞಾನವಿದೆ.
3 ಯಥಾರ್ಥವಂತರ ಪ್ರಾಮಾಣಿಕತೆ ಅವರನ್ನು ನಡಿಸುವದು; ಅಪರಾಧದ ಮೂರ್ಖತನವು ಅವರನ್ನು ನಾಶಪಡಿಸುವದು.
4 ಉಗ್ರತೆಯ ದಿನದಲ್ಲಿ ಐಶ್ವರ್ಯವು ಲಾಭಕರವಾಗುವದಿಲ್ಲ; ನೀತಿಯು ಮರಣ ದಿಂದ ಬಿಡಿಸುತ್ತದೆ.
5 ಸಂಪೂರ್ಣನ ನೀತಿಯು ಅವನ ಮಾರ್ಗವನ್ನು ಸರಾಗಮಾಡುವದು; ದುಷ್ಟನು ತನ್ನ ದುಷ್ಟತ್ವದಿಂದಲೇ ಬೀಳುವನು.
6 ಯಥಾರ್ಥವಂತರ ನೀತಿಯು ಅವರನ್ನು ಬಿಡಿಸುವದು; ತಮ್ಮ ಸ್ವಂತ ತುಂಟ ತನದಲ್ಲಿ ದೋಷಿಗಳು ಸಿಕ್ಕಿಬೀಳುವರು.
7 ದುಷ್ಟನು ಸಾಯುವಾಗ ಅವನ ನಿರೀಕ್ಷೆಗಳು ಹಾಳಾಗುವವು; ಅನೀತಿವಂತನ ನಿರೀಕ್ಷೆಯು ನಾಶವಾಗುವದು.
8 ನೀತಿವಂತನು ಇಕ್ಕಟ್ಟಿನಿಂದ ತಪ್ಪಿಸಿಕೊಳ್ಳುತ್ತಾನೆ; ಅವನ ಸ್ಥಳದಲ್ಲಿ ದುಷ್ಟನು ಬರುತ್ತಾನೆ.
9 ಒಬ್ಬ ಕಪಟಿಯು ಬಾಯಿಂದ ತನ್ನ ನೆರೆಯವನನ್ನು ಹಾಳುಮಾಡುತ್ತಾನೆ; ತಿಳುವಳಿಕೆಯ ಮೂಲಕ ನೀತಿವಂತನು ಬಿಡಿಸಲ್ಪ ಡುವನು.
10 ನೀತಿವಂತರು ಚೆನ್ನಾಗಿದ್ದರೆ ಪಟ್ಟಣವು ಉಲ್ಲಾಸಿಸುತ್ತದೆ; ದುಷ್ಟರು ನಾಶವಾದರೆ ಆರ್ಭಟವಿರು ತ್ತದೆ.
11 ಯಥಾರ್ಥವಂತರ ಆಶೀರ್ವಾದದಿಂದ ಪಟ್ಟ ಣವು ಹೆಚ್ಚಿಸಲ್ಪಡುತ್ತದೆ. ದುಷ್ಟರ ಬಾಯಿಂದ ಅದು ಕೆಡವಲ್ಪಡುತ್ತದೆ.
12 ಜ್ಞಾನವಿಲ್ಲದವನು ತನ್ನ ನೆರೆಯ ವನನ್ನು ಹೀನೈಸುತ್ತಾನೆ; ವಿವೇಕಿಯು ಮೌನವಾಗಿರು ತ್ತಾನೆ.
13 ಚಾಡಿಕೋರನು ರಹಸ್ಯಗಳನ್ನು ಬಹಿರಂಗ ಪಡಿಸುತ್ತಾನೆ. ನಂಬಿಕೆಯ ಆತ್ಮವುಳ್ಳವನು ಸಂಗತಿಯನ್ನು ಮುಚ್ಚುತ್ತಾನೆ.
14 ಆಲೋಚನೆ ಇಲ್ಲದಿರುವಲ್ಲಿ ಜನರು ಬೀಳುತ್ತಾರೆ; ಸಲಹೆಗಾರರ ಸಮೂಹದಲ್ಲಿ ಭದ್ರತೆ ಇದೆ.
15 ಅನ್ಯನಿಗೆ ಹೊಣೆಯಾಗುವವನು ಹಾನಿಗೆ ಗುರಿಯಾಗುತ್ತಾನೆ; ಹೊಣೆಗಾರತ್ವವನ್ನು ಹಗೆಮಾಡಿ ಕೊಳ್ಳುವವನು ಭದ್ರವಾಗಿರುವನು.
16 ಕೃಪೆಯುಳ್ಳ ಸ್ತ್ರೀಯು ತನ್ನ ಗೌರವವನ್ನು ಕಾಪಾಡಿಕೊಳ್ಳುತ್ತಾಳೆ. ಬಲಿಷ್ಠರು ಐಶ್ವರ್ಯವನ್ನು ಕಾಪಾಡಿಕೊಳ್ಳುತ್ತಾರೆ.
17 ಕರುಣೆಯುಳ್ಳವನು ತನ್ನ ಪ್ರಾಣಕ್ಕೆ ಒಳ್ಳೇದನ್ನು ಮಾಡಿಕೊಳ್ಳುತ್ತಾನೆ; ಕಠೋರಿಯು ತನ್ನ ಶರೀರವನ್ನು ಬಾಧಿಸಿಕೊಳ್ಳುತ್ತಾನೆ.
18 ದುಷ್ಟನು ಮೋಸದ ಕೃತ್ಯವನ್ನು ಮಾಡುತ್ತಾನೆ; ನೀತಿಯನ್ನು ಬಿತ್ತುವವನಿಗೆ ನಿಸ್ಸಂದೇಹ ವಾಗಿ ಬಹುಮಾನವಿರುವದು.
19 ನೀತಿಯು ಜೀವಕ್ಕೆ ಒಲಿಯುತ್ತದೆ; ಕೆಟ್ಟದ್ದನ್ನು ಹಿಂದಟ್ಟುವವನು ತನ್ನ ಮರ ಣಕ್ಕೆ ಹಿಂದಟ್ಟುತ್ತಾನೆ.
20 ಮೂರ್ಖ ಹೃದಯವುಳ್ಳವರು ಕರ್ತನಿಗೆ ಅಸಹ್ಯವಾದವರು; ತಮ್ಮ ಮಾರ್ಗದಲ್ಲಿ ಯಥಾರ್ಥವಾಗಿ ಇರುವವರು ಆತನ ಆನಂದವಾಗಿ ದ್ದಾರೆ.
21 ಕೈಗೆ ಕೈ ಕೊಟ್ಟರೂ ದುಷ್ಟನು ಶಿಕ್ಷಿಸಲ್ಪಡದೆ ಇರುವದಿಲ್ಲ; ನೀತಿವಂತರ ವಂಶವು ತಪ್ಪಿಸಿಕೊಳ್ಳುವದು.
22 ಹಂದಿಯ ಮೂಗಿನಲ್ಲಿರುವ ಬಂಗಾರದ ಒಡವೆಯು ಹೇಗೋ ಹಾಗೆಯೇ ವಿವೇಕವಿಲ್ಲದ ಸುಂದರವಾದ ಸ್ತ್ರೀಯು ಇರುವಳು.
23 ನೀತಿವಂತರು ಒಳ್ಳೇಯದನ್ನು ಮಾತ್ರ ಅಪೇಕ್ಷಿಸುತ್ತಾರೆ; ದುಷ್ಟರ ಅಪೇಕ್ಷೆಯು ಕೋಪ ವಾಗಿದೆ.
24 ಚದುರಿಸಿದಾಗ್ಯೂ ವೃದ್ಧಿಯಾಗುತ್ತದೆ; ಬೇಕಾದದ್ದಕ್ಕಿಂತ ಹೆಚ್ಚಿನದನ್ನು ಬಿಗಿಹಿಡಿಯುವಂಥದ್ದು ಬಡತನಕ್ಕೆ ನಡಿಸುತ್ತದೆ.
25 ಉದಾರಿಯು ಪುಷ್ಠನಾಗು ವನು; ನೀರು ಹಾಯಿಸುವವನಿಗೆ ನೀರು ದೊರೆಯು ವದು.
26 ಧಾನ್ಯವನ್ನು ಬಿಗಿಹಿಡಿಯುವವನನ್ನು ಜನರು ಶಪಿಸುವರು; ಅದನ್ನು ಮಾರುವವನ ತಲೆಯ ಮೇಲೆ ಆಶೀರ್ವಾದವು ನೆಲೆಯಾಗಿರುವದು.
27 ಒಳ್ಳೇದನ್ನು ಸೂಕ್ಷ್ಮವಾಗಿ ಹುಡುಕುವವನು ದಯೆಯನ್ನು ಹೊಂದು ತ್ತಾನೆ; ಆದರೆ ಕೇಡನ್ನು ಹುಡುಕುವವನಿಗೆ ಕೇಡೇ ಆಗುವದು.
28 ತನ್ನ ಐಶ್ವರ್ಯವನ್ನು ನಂಬಿದವನು ಬಿದ್ದುಹೋಗುವನು; ನೀತಿವಂತರು ಕೊಂಬೆಯ ಹಾಗೆ ಚಿಗುರುವರು.
29 ತನ್ನ ಮನೆಯವರನ್ನು ಬಾಧಿಸುವವನು ಗಾಳಿಯನ್ನು ಬಾಧ್ಯವಾಗಿ ಹೊಂದುವನು; ಜ್ಞಾನವುಳ್ಳ ಹೃದಯದವನಿಗೆ ಅವಿವೇಕಿಯು ಸೇವಕನಾಗಿರುವನು.
30 ನೀತಿವಂತರ ಫಲವು ಜೀವವೃಕ್ಷ; ಆತ್ಮಗಳನ್ನು ಗೆಲ್ಲು ವವನು ಜ್ಞಾನಿಯಾಗಿದ್ದಾನೆ.
31 ಇಗೋ, ಭೂಮಿಯ ಮೇಲೆ ನೀತಿವಂತರು ಪ್ರತಿಫಲವನ್ನು ಹೊಂದುವರು; ದುಷ್ಟನೂ ಪಾಪಿಯೂ ಎಷ್ಟೋ ಹೆಚ್ಚಾಗಿ ಪ್ರತಿಫಲ ವನ್ನು ಹೊಂದುತ್ತಾರೆ.